APPU AMARA
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,
ಏನೇ ಬರಲಿ ಯಾರಿಗೂ ಎಂದು ತಲೆಯ ಬಾಗದು,
ಎಂದಿಗೂ ನಾನು ಹೀಗೆ ಇರುವೆ ಎಂದು ನಗುವುದು,ಹೀಗೆ ನಗುತಲಿರುವುದು
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,
ಗುಡಿಸಲೇ ಆಗಲಿ,ಅರಮನೆ ಆಗಲಿ,ಆಟ ನಿಲ್ಲದು,
ಹಿರಿಯರೇ ಇರಲಿ,ಕಿರಿಯರೆ ಬರಲಿ,ಭೇದ ತೋರದು,
ಗುಡಿಸಲೇ ಆಗಲಿ,ಅರಮನೆ ಆಗಲಿ,ಆಟ ನಿಲ್ಲದು,
ಹಿರಿಯರೇ ಇರಲಿ,ಕಿರಿಯರೆ ಬರಲಿ,ಭೇದ ತೋರದು,
ಕಷ್ಟವೋ,ಸುಖವೋ ಅಳುಕದೆ ಆಡಿ,ತೂಗುತಿರುವುದು,ತೂಗುತಿರುವುದು
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,
ಮೈಯನೆ ಹಿಂಡಿ ನೊಂದರು ಕಬ್ಬುಸಿಹಿಯ ಕೊಡುವುದು,
ತೇಯುತಲಿದ್ದರು ಗಂಧದ ಪರಿಮಳ ತುಂಬಿ ಬರುವುದು,
ಮೈಯನೆ ಹಿಂಡಿ ನೊಂದರು ಕಬ್ಬುಸಿಹಿಯ ಕೊಡುವುದು,
ತೇಯುತಲಿದ್ದರು ಗಂಧದ ಪರಿಮಳ ತುಂಬಿ ಬರುವುದು,
ತಾನೇ ಉರಿದರು ದೀಪವು ಮನೆಗೆ ಬೆಳಕ ತರುವುದು,ದೀಪ ಬೆಳಕ ತರುವುದು
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,
ಆಡಿಸುವಾತನ ಕೈ ಚಳಕದಲಿ ಎಲ್ಲಾ ಅಡಗಿದೆ,
ಆತನ ಕರುಣೆಯ ಜೀವವ ತುಂಬಿ ಕುಣಿಸಿ ನಲಿಸಿದೆ,
ಆಡಿಸುವಾತನ ಕೈ ಚಳಕದಲಿ ಎಲ್ಲಾ ಅಡಗಿದೆ,
ಆತನ ಕರುಣೆಯ ಜೀವವ ತುಂಬಿ ಕುಣಿಸಿ ನಲಿಸಿದೆ,
ಆ ಕೈ ಸೋತರೆ ಬೊಂಬೆಯ ಕಥೆಯು ಕೊನೆಯಾಗುವುದೇ ,ಕೊನೆಯಾಗುವುದೇ.
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು,
ಏನೇ ಬರಲಿ ಯಾರಿಗೂ ಎಂದು ತಲೆಯ ಬಾಗದು,
ಎಂದಿಗೂ ನಾನು ಹೀಗೆ ಇರುವೆ ಎಂದು ನಗುವುದು,ಹೀಗೆ ನಗುತಲಿರುವುದು
ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು
ಮುತ್ತಿನಂತ ಮಾತೊಂದು ಗೊತ್ತೇನಮ್ಮ,ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು,ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು,
ಶ್ರೀಮಂತಿಕೆಯು ಮೆರೆಯಲು ಅಲ್ಲಾ,ರಾಜಕುಮಾರಿ ದೇವತೆಯಲ್ಲ ,
ಶ್ರೀಮಂತಿಕೆಯು ಮೆರೆಯಲು ಅಲ್ಲಾ,ರಾಜಕುಮಾರಿ ದೇವತೆಯಲ್ಲ ,
ಹಸಿವು ನಿದ್ದೆ ,ಕೋಪ ತಾಪ,ನಿನಗೂ ಇದೆ ........ಹಾನ್,
ನಿನ್ನಂತೆ ರೋಷ ,ದ್ವೇಷ ನಮಗೂ ಇದೆ,
ಹಸಿವು ನಿದ್ದೆ ,ಕೋಪ ತಾಪ,ನಿನಗೂ ಇದೆ,
ನಿನ್ನಂತೆ ರೋಷ ,ದ್ವೇಷ ನಮಗೂ ಇದೆ,
ಈ ನಿಜವನ್ನು ಅರಿತಾಗ ಹೆಣ್ಣಾ ಗುವೇ ,ಇಲ್ಲ ಮಣ್ಣುತಿನ್ನುವೆ ಹೇ...........
ಮುತ್ತಿನಂತ ಮಾತೊಂದು ಗೊತ್ತೇನಮ್ಮ,ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು,ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು